ಹೀಗೊಂದು ಸಂಭಾಷಣೆ!

ಆ ದಿನವೂ, ಎಂದಿನಂತೆ ಮೆಟ್ರೋದಿಂದ ಇಳಿದು ಹೊರಗೆ ಬಂದು ಆಟೋಗೆ ಕೈ ಸನ್ನೆ ಮಾಡಿದೆ. ಒಂದು ಆಟೋ ನನ್ನ ಮುಂದೆ ಬಂದು ನಿಂತಿತು.

“ಸುಬ್ಬಯ್ಯ ಸರ್ಕಲ್ ಬರ್ತೀರಾ?” ನಾನು ಕೇಳಿದೆ.

“ಹೂ ಮೇಡಂ”, ಅಂದ.

ಮೊದಲ ಆಟೋವೇ ಕೇಳಿದ ತಕ್ಷಣ ಬಂದ ಸಂತೋಷ ಒಂದಡೆ ಆದರೆ, ಆಟೋದವನು ಬೇರೆ ಹಾದಿ ಹಿಡಿದು ಹೋದನೆಂದು ತಳಮಳ ಇನ್ನೊಂದೆಡೆ. ನಾನು ಸಮಾಧಾನದಿಂದಲೇ ಕೇಳಿದೆ;

“ಈ ಹಾದಿಯೂ ಸುಬ್ಬಯ್ಯ ಸರ್ಕಲ್ಗೆ ಸೇರುತ್ತೆ ?”

“ಹೌದು ಮೇಡಂ, ಅಲ್ಲಿಗೆ ಹೋಗುತ್ತೆ. ಹೀಗೆ ರೈಟ್ ತೊಗಂಡ್ರೆ ಸೀದಾ ಅಲ್ಲಿಗೆ ಸೇರುತ್ತೆ!” ಅಂದನವನು.

“ಸರಿ ಹಾಗಂದ್ರೆ, ನಿಮಗೆ ದಾರಿ ಗೊತ್ತಿದ್ರೆ ಹಾಗೆ ಹೋಗಿ”.

ನಾ ಕೇಳಿದ ಪ್ರಶ್ನೆಗೆ , ಅವನಿಗೂ ದಾರಿಯು ತಪ್ಪೇನೋ ಅನ್ನೋ ಅನುಮಾನದಿಂದ;

“ಸರಿ ಮೇಡಂ, ನಿಮಗೆ ಹೇಗೆ ಹೋಗಬೇಕೋ ಹಾಗೆ ಹೋಗೋಣ” ಅಂದ.

ಅವನಿಗೆ ದಾರಿ ತೋರಿಸಿ, ಹೀಗೆ ಮುಂದೆ ಹೋಗಿ ರೈಟ್ ತೊಗಂಡ್ರೆ , ಕಾರ್ಪೋರೇಶನ್ ಸರ್ಕಲ್ ಸಿಗುತ್ತೆ , ಅಲ್ಲಿಂದ ಸೆಕೆಂಡ್ ರೈಟ್ ಸುಬ್ಬಯ್ಯ ಸರ್ಕಲ್!

ಆಗ ಅವನು , “ಸಾರೀ ಮೇಡಂ, ದಿನಾ ಇನ್ನೊಂದು ಕಡೆಯಿಂದ ಬರ್ತೀನಿ ಅದಕ್ಕೆ ದಾರಿ ಸ್ವಲ್ಪ ಕನ್ಫ್ಯೂಷನ್ ಆಯಿತು” ಅಂದ.

ಸರಿ, ಪರವಾಗಿಲ್ಲ, ಆಗುತ್ತೆ ಕೆಲವೊಮ್ಮೆ, ಆದ್ರೆ ಮೀಟರ ಆಗ್ಲೇ ಒಂದು ಕಿ.ಮೀ. ಓಡಿ ಆಯಿತು, ಪುನಃ ಆದೆ ಹತ್ತಿದ ಜಾಗಕ್ಕೆ ಬಂದ್ವಿ ಅಂದೆ.

ಅದಕ್ಕೆ ಅವನು; ಮೀಟರ ರಿಸೆಟ್ ಮಾಡಿ,

ನ್ಯಾಯವಾಗಿ ದುಡಿದರೆ ನಿಲ್ಲಲ್ಲಾ ಹಣ, ಇನ್ನು ಅನ್ಯಾಯದು ನಿಲ್ಲುತ್ತಾ? ನನಗೆ ಬೇಡ ಮೇಡಂ ಅಂದ.

ಹಾಗಲ್ಲ, ನಂಗೆ ಗೊತ್ತು ಎಷ್ಟು ಆಗುತ್ತೆ ಅಂತಾ, ನಾನು ನಿಮಗೆ ಅಷ್ಟು ಹಣ ಕೊಡ್ತೀನಿ, ಬೇಸರಿಸದಿರಿ ಎಂದೆ. ಅಂದ ಹಾಗೆ, ನ್ಯಾಯದ ಹಣ ಯಾವಾಗಲು ಕೊನಯ ತನಕ ಇರುತ್ತೆ! ಅನ್ಯಾಯದ ಹಣ ಸ್ವಲ್ಪ ದಿನ ಮಾತ್ರ ಇದ್ದು, ಕ್ಷಣ ಮಾತ್ರ ಸಂತೋಷವನ್ನುಂಟು ಮಾಡುತ್ತೆ.

ಇಲ್ಲಾ ಮೇಡಂ, ನಾನು ನೋಡಿದ್ದೀನಿ, ಎಷ್ಟೊಂದು ಜನ ಅನ್ಯಾಯದ ದುಡ್ಡಿನಿಂದ ಎಷ್ಟು ಮುಂದೆ ಹೋಗಿ ಸುಖ ಜೀವನ ಮಾಡುತ್ತಿದ್ದಾರೆ. ನಾನು ಮಾತ್ರ ಎಲ್ಲಿ ಇದ್ನೋ ಅಲ್ಲೇ ಇದ್ದೀನಿ ಏಂದು ಮರುಕ ತೊಡಗಿದ.

ಹಾಗೆ ಏಕೆ ಯೋಚಿಸುತ್ತಿರಿ, ದೂರದ ಬೆಟ್ಟ ಯಾವಾಗಲು ಚೆನ್ನಾಗಿ ಕಾಣುತ್ತೆ! ಅಷ್ಟೇ ನಿಮ್ಮ ಯೋಚನೆ ಕೂಡ.

ನಂತರ ಹಾಗೆ ಒಂದಿಷ್ಟು ಮಾತು ಕಥೆ ನಡಿತು. ಆತ ತನ್ನ ಸುದ್ದಿ ಹೇಳತೊಡಗಿದ. ನಾನು ಹಾಗೇಯೇ ಆಲಿಸುತಿದ್ದೆ. ಹಾಗೆ ಹೇಳುತ್ತಾ;

ಮೇಡಂ, ಹೆಂಗಸರು ಆಫೀಸ್ ಮತ್ತು ಮನೆಯ ಕೆಲಸ ಅಂಥ ಎರಡನ್ನು ಸಮತೋಲಿಸುದು ಎಷ್ಟು ಕಷ್ಟ ಅಲ್ವಾ? ಮಕ್ಕಳನ್ನು ಸಹ ನೋಡ್ಕೋಬೇಕು! ನಾನು ಮನೆಗೆ ಹೋಗಿ ಊಟ ಮಾಡಿ, ಸ್ವಲ್ಪ ರೆಸ್ಟ್ ಮಾಡಿ, ಮತ್ತೆ ಕೆಲಸಕ್ಕೆ ಹೊರಡುತೀನಿ, ಮನೆಯಲ್ಲಿ ಎಲ್ಲಾ ನನ್ನ ಹೆಂಡತಿನೇ ನೋಡಿಕೊಳ್ಳುತ್ತಾಳೆ. ನಿಜ , ನೀವು ಆಫೀಸ್ ಕೆಲಸದ ಜೊತೆ ಮನೆದು ಅಂದ್ರೆ ತುಂಬಾ ಕಷ್ಟವಲ್ವಾ? ನನ್ನ ಮಟ್ಟಿಗೆ, ಹೆಂಗಸರು ಮನೇಲೇ ಇರಬೇಕು, ಸುಮ್ನೆ ಇಷ್ಟೊಂದು ಕಷ್ಟ ಪಡಬಾರದು.

ಅದಕ್ಕೆ ನಾನು;

ನಾವು ಇಷ್ಟು ಓದಿ, ಒಂದು ಹಂತಕ್ಕೆ ಸ್ವತಂತ್ರ ಆಗಿದ್ದು, ಮದ್ವೆ ಆಯ್ತು, ಮಕ್ಕಳು ಆದ್ರು ಅಂಥ ಕೆಲಸ ಕಷ್ಟ ಅನ್ನೋದು ಸರಿಯೇ? ಎಲ್ಲಿಯವರಗೆ ಮ್ಯಾನೇಜ್ ಮಾಡಲು ಆಗುತ್ತೋ, ಅಲ್ಲಿಯವರೆಗೆ ಮಾಡುತ್ತಾ ನಮ್ಮ ಅರ್ಧಂಗಿಗೆ ನೆರವಾಗ ಬೇಕು, ಅದೇ ಸಹಬಾಳ್ವೆ. ಇಲ್ಲಾ ಅಂದ್ರೆ ಹೆಂಗಸರಿಗೆ ಹೇಗೆ ಗೊತ್ತಾಗುತ್ತೇ ಹಣದ ಮಹತ್ವ? ಸುಮ್ನೆ ಬೇಕಾ ಬಿಟ್ಟಿ, ಗಂಡನ ಮುಂದೆ ಡಿಮ್ಯಾಂಡ್ ಇಡೊ ಹೆಂಡತಿ ಆಗೋ ಇಷ್ಟ ಇಲ್ಲ ನಂಗೆ ಅನ್ನುತಾ ಒಂದು ನಗು ಬೀರೀದೆ.

ಅಲ್ಲಿಗೆ ನನ್ನ ಆಫೀಸ್ ಬಂತು! ನಾನು ಕಾಸು ಕೊಟ್ಟು, ಒಂದು ಸ್ಮೈಲ್ ಕೊಟ್ಟು, ಥಾಂಕ್ ಯು ಹೇಳಿ ಕೆಳಗಿಳಿದೆ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s