ಹೊಸ ಅನುಭವ

ಮೈ ನಡುಕುವ ಚಳಿ.. ತಲೆ ಎತ್ತರಕ್ಕೆ ಹಾರುವ ವಿಮಾನ, ಅದರ ಅಬ್ಬರದ ಸದ್ದು.. ರಮಣೀಯ ಬಣ್ಣ ಬಣ್ಣದ ಎಲೆಗಳಿಂದ ಮೈದುಂಬಿಕೊಂಡ ಸಾಧಾರಣ ಎತ್ತರದ ಸಾಲು ಮರಗಳು.. ಸಾಲಾಗಿ ಸಾಗುವ ವಾಹನಗಳು.. ಎಲ್ಲವು ಹೊಸತು.. ಇದು ಒಂದು ವಾರದಿಂದ ನಾ ಕಂಡ ಅಮೇರಿಕಾ!

fall-color

Fall Color

ಡಿಸೆಂಬರ ತಿಂಗಳು.. ಚಳಿ ಇಲ್ಲದೆ ಇನ್ನೇನು ಹೇಳಿ! ಭಯಂಕರವಾದ ಚಳಿ. San Francisco – ಪಶ್ಚಿಮ ಕರಾವಳಿ ಆದ ಕಾರಣ ಚಳಿ ಕಡಿಮೆ , ಬಿಸಿಲು ಇರುತ್ತೆ , ತುಂಬಾ ಒಳ್ಳೆ ವಾತಾವರಣ ಅಂತಾರೆ ಇಲ್ಲಿಯ ಸ್ನೇಹಿತರು! ಆದರೂ ನನಗೇನೋ ತುಂಬಾ ಚಳಿ. ಇನ್ನು ಒಂದೇ ವಾರ ಆಗಿದೆ ಅಲ್ವಾ , ಕಾದು ನೋಡೋಣ. ಬಹುಶ ನಾನು ಆಮೇಲೆ ಹೀಗೆ ಹೇಳುತಿನೇನೂ 😃

ಬಹಳ ಮಟ್ಟಿಗೆ ನಮ್ಮ ಭಾರತದಲ್ಲೇ ಇರುವ ಅನುಭವ – ಸುತ್ತ ಮುತ್ತ ನಮ್ಮದೇಶದ ಜನರೇ.. ನಮ್ಮ ದೇಶದ ಅಂಗಡಿಗಳು.. ನಮಗೆ ಬೇಕಾದ ಎಲ್ಲಾ ತರಹದ ತಿಂಡಿ ತಿನಿಸು, ವಸ್ತುಗಳು.. ಎಲ್ಲವು ಇವೆ! ಆದರೂ ನನ್ನವರು ನನ್ನೊಂದಿಗೆ ಇಲ್ಲದ ಬೇಸರ, ಅಸಮಾಧಾನವೇ ಹೆಚ್ಚು! ಯಾವಾಗ ನನ್ನವರು ಮತ್ತು ನನ್ನ ಮಗ ಇಲ್ಲಿಗೆ ಬಂದು ಸೇರುವರೋ ಅನ್ನೋ ಮನಸ್ಸಿನಿಂದಲೇ ದಿನ ಕಳೆಯುತ್ತಿರೋ ಜೀವ ಇದು!

ಸಮಯ ಗೊತ್ತೇ ಆಗೋದಿಲ್ಲ. ಹೊರಗೆ ಕತ್ತಲಾಗುದನ್ನ ಕಂಡು ರಾತ್ರಿ ಅನ್ನೋ ಹಾಗೂ ಇಲ್ಲ – ಸಂಜೆ ೫ ಗಂಟೆ ಒಳ್ಳೆ ರಾತ್ರಿ ಹತ್ತು ಗಂಟೆ ತರಹ! ಸಮಯದ ವ್ಯತ್ಯಾಸದಿಂದ ಎಲ್ಲವು ಕಷ್ಟ ಅನಿಸುತಿದೆ!  ಬೇಗ ಈ ಜಗತ್ತಿಗೆ ಹೊಂದಿಕೊಳ್ಳಬೇಕು. ಈ ಹೊಸ ಪ್ರಪಂಚವನ್ನು ಭೇದಿಸಿ ನೋಡೋಣ!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s