ಅಮ್ಮ – #ಕನ್ನಡವರ್ಣಮಾಲೆಸವಾಲು

ಹೊಸ ವರ್ಷಕ್ಕೆ ನನ್ನದೊಂದು ಸಣ್ಣ ಪ್ರಯತ್ನ. ಕನ್ನಡ ವರ್ಣಮಾಲೆಯಲ್ಲಿ ಬರುವ ಪ್ರತಿ ಅಕ್ಷರದ ಒಂದು ಬ್ಲಾಗ್ ಪೋಸ್ಟ್. ನೀವು ಸಹ ಪ್ರಯತ್ನ ಮಾಡಿ ಹಾಗು ನನ್ನ ಈ ಬ್ಲಾಗ್ ಪೋಸ್ಟ್ಗೆ ಲಿಂಕ್ ಮಾಡಿ. ಈ ವರ್ಷ ಕೊನೆಗೊಳ್ಳುವ ಮುನ್ನ ಮುಗಿಸುವ ಸವಾಲು. ಕಥೆ/ಕವನ/ಚುಟುಕು/ಸಂಭಾಷಣೆ/ಮಾಹಿತಿ/ಚಿತ್ರ/ಛಾಯಾಗ್ರಹಣ/ನಾಟಕದ ತುಂಡು/ಸನ್ನಿವೇಶ ಅಥವಾ ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಒಂದು ಪೋಸ್ಟ್ ಒಂದು ಅಕ್ಷರಕ್ಕೆ ಅಥವಾ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಂಚಿಕೊಳ್ಳಿ.

ಆಂಗ್ಲ ಭಾಷೆಯ ಪ್ರಭಾವದಿಂದ ಕನ್ನಡದಲ್ಲಿ ಬರಿಯೋದು ಸ್ವಲ್ಪ ಕ್ಲಿಷ್ಟ, ಆದ ಕಾರಣ ಚಿಕ್ಕ ಹಾಗು ಚೊಕ್ಕವಾಗಿ ಬರಿಯುವ ಒಂದು ಸಣ್ಣ ಪ್ರಯತ್ನ.

#ಕನ್ನಡವರ್ಣಮಾಲೆಸವಾಲು

ಮೊದಲ ಅಕ್ಷರ ಹಾಗು ಸ್ವರ: “ಅ”

Alphabet1

“ಅಮ್ಮ”

“ಅ” ಅಂದಾಗ ಬರುವ ಮೊದಲ ಪದ “ಅಮ್ಮ”. ಮಗು ನುಡಿಯುವ ಮೊದಲ ಪದ “ಅಮ್ಮ”. ತಾಯಿಯ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆಕಟ್ಟಲಾಗದು. ಮಕ್ಕಳ ಬೆಳವಣಿಗೆಗೆ ಮತ್ತು ಅವರ ಭವಿಷ್ಯ ನಿರೂಪಿಸಲು ಬಹಳ ಪ್ರಮುಖವಾದ ಪಾತ್ರವನ್ನು ತಾಯಿ ನಿರ್ವಹಿಸುತ್ತಾಳೆ. ಅಮ್ಮನ ಪಾತ್ರ ಸುಲಭವಲ್ಲ.

ನನ್ನ ಜೀವನದಲ್ಲೂ ನನ್ನ ಅಮ್ಮನ ಪ್ರಭಾವ ತುಂಬಾ ಇದೆ. ಅವರಿಗೆ ಮೂಗಿನ ತುದಿಯೇ ಕೋಪ 🙂 , ಆದ್ರೂ ಅವಳೆಂದರೆ ನನಗೆ ತುಂಬಾ ಪ್ರೀತಿ. ತಾಯಿಯ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. “ತಾಯಿಯೇ ದೇವರು”. “ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ”. ಈ ಗಾದೆ ಮಾತು ಶೇಕಡಾ ನೂರಕ್ಕೆ ನೂರು ಸರಿಯಾಗಿ ಹಿಂದಿನವರು ರೂಪಿಸಿದ್ದಾರೆ.

ನಾನು ಸಹ ಅತ್ಯುತ್ತಮ ಅಮ್ಮನಾಗಿ, ನನ್ನ ಮಗನ ಭವಿಷ್ಯಕ್ಕೆ ಒಳ್ಳೆ ಮಾರ್ಗದರ್ಶನ ಮಾಡುತ್ತೇನೆ ಎಂದು ಬಯಸುತ್ತಾ, ಪ್ರಪಂಚದ ಎಲ್ಲಾ ಮಾತೆಯರಿಗೂ ನನ್ನದೊಂದು (Big Salute) ಹೃತ್ಪೂರ್ವಕ ವಂದನೆಗಳು.!!

Advertisements

9 thoughts on “ಅಮ್ಮ – #ಕನ್ನಡವರ್ಣಮಾಲೆಸವಾಲು

  1. ಕಂದನು ನುಡಿವ ಮೊದಲನೆ ಪದವೇ ಅಮ್ಮಾ, ಅಮ್ಮಾ.
    ಎರಡಕ್ಷರದಲಿ ಏನಿದೆ ಶಕ್ತಿ, ಹೇಳುವರಾರಮ್ಮ?
    “ಅಮ್ಮ” ಎಂಬುದನ್ನು ಸಂಪೂರ್ಣವಾಗಿ, ಸಮರ್ಥವಾಗಿ ಒಮ್ಮೆಲೇ ಯಾರೂ ವಿವರಿಸಲು ಸಾಧ್ಯವಿಲ್ಲವೇನೋ ಅನ್ನುವಷ್ಟು ದೊಡ್ಡ ಪದ.. ಪ್ರತಿಯೊಬ್ಬ ಅಮ್ಮನೂ ಬೇರೆಯೇ ಆಗಿರುತ್ತಾಳೆ.. “ಅಮ್ಮ”ನಿಗೆ “ತಾಯಿ”ಯೇ ಸಾಟಿ.

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s