ಆಸೆ – #ಕನ್ನಡವರ್ಣಮಾಲೆಸವಾಲು

ಹೊಸ ವರ್ಷಕ್ಕೆ ನನ್ನದೊಂದು ಸಣ್ಣ ಪ್ರಯತ್ನ. ಕನ್ನಡ ವರ್ಣಮಾಲೆಯಲ್ಲಿ ಬರುವ ಪ್ರತಿ ಅಕ್ಷರದ ಒಂದು ಬ್ಲಾಗ್ ಪೋಸ್ಟ್. ನೀವು ಸಹ ಪ್ರಯತ್ನ ಮಾಡಿ ಹಾಗು ನನ್ನ ಈ ಬ್ಲಾಗ್ ಪೋಸ್ಟ್ಗೆ ಲಿಂಕ್ ಮಾಡಿ. ಈ ವರ್ಷ ಕೊನೆಗೊಳ್ಳುವ ಮುನ್ನ ಮುಗಿಸುವ ಸವಾಲು. ಕಥೆ/ಕವನ/ಚುಟುಕು/ಸಂಭಾಷಣೆ/ಮಾಹಿತಿ/ಚಿತ್ರ/ಛಾಯಾಗ್ರಹಣ/ನಾಟಕದ ತುಂಡು/ಸನ್ನಿವೇಶ ಅಥವಾ ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಒಂದು ಪೋಸ್ಟ್ ಒಂದು ಅಕ್ಷರಕ್ಕೆ ಅಥವಾ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಂಚಿಕೊಳ್ಳಿ.

#ಕನ್ನಡವರ್ಣಮಾಲೆಸವಾಲು


ನ೦ತರದ ಅಕ್ಷರ ಹಾಗು ಸ್ವರ: “ಆ”

Alphabet2

ಮೊದಲ ಬಾರಿಗೆ ನಾನು ಒಂದು ಕವನ ಬರಿಯುವ ಪ್ರಯತ್ನ. 🙂

“ಆಸೆ”

ಹಕ್ಕಿಗೆ ಹಾರುವ ಆಸೆ,
ಮೀನಿಗೆ ಈಜುವ ಆಸೆ,
ಓ ಮನವೇ.. ನಿನಗೇನೂ ಆಸೆ?

ಆಕಾಶದಲ್ಲಿ ತೇಲುವ ಆಸೆ,
ನಕ್ಷತ್ರದಂತೆ ಮಿನುಗುವ ಆಸೆ,
ಪೂರ್ಣ ಚಂದ್ರನ ಹೋಲುವ ಆಸೆ,
ಓ ಮನವೇ.. ನಿನಗೆಷ್ಟೊಂದು ಆಸೆ!!!

ಜಿಂಕೆಯಂತೆ ಜಿಗಿಯುವ ಆಸೆ,
ನವಿಲಂತೆ ನರ್ತಿಸುವ ಆಸೆ,
ಮಳೆ ಹನಿಯಲಿ ಮನ ಬಿಚ್ಚಿ ಕುಣಿಯುವ ಆಸೆ,
ಓ ಮನವೇ.. ನಿನಗೆಷ್ಟೊಂದು ಆಸೆ!!!

ಸಾಕು ಮನವೇ, ನಿನ್ನ ಈ ಆಸೆಯ ಪಟ್ಟಿ
ಮರುಳಿ ಬಾ ಮನವೇ, ವಾಸ್ತವ ಲೋಕಕ್ಕೆ!
ಓ ಮನವೇ, ಆಗು ನೀ ಗಟ್ಟಿ
ಮರೆಯದಿರು ಈ ಮಂತ್ರ, ಆಸೆಯೇ ಕಾರಣ ದುಃಖಕ್ಕೆ!

– ಶಿಲ್ಪಾ ಪ್ರಜ್ವಲ್

9 thoughts on “ಆಸೆ – #ಕನ್ನಡವರ್ಣಮಾಲೆಸವಾಲು

Leave a comment