ಹೊಸ ವರ್ಷಕ್ಕೆ ನನ್ನದೊಂದು ಸಣ್ಣ ಪ್ರಯತ್ನ. ಕನ್ನಡ ವರ್ಣಮಾಲೆಯಲ್ಲಿ ಬರುವ ಪ್ರತಿ ಅಕ್ಷರದ ಒಂದು ಬ್ಲಾಗ್ ಪೋಸ್ಟ್. ನೀವು ಸಹ ಪ್ರಯತ್ನ ಮಾಡಿ ಹಾಗು ನನ್ನ ಈ ಬ್ಲಾಗ್ ಪೋಸ್ಟ್ಗೆ ಲಿಂಕ್ ಮಾಡಿ. ಈ ವರ್ಷ ಕೊನೆಗೊಳ್ಳುವ ಮುನ್ನ ಮುಗಿಸುವ ಸವಾಲು. ಕಥೆ/ಕವನ/ಚುಟುಕು/ಸಂಭಾಷಣೆ/ಮಾಹಿತಿ/ಚಿತ್ರ/ಛಾಯಾಗ್ರಹಣ/ನಾಟಕದ ತುಂಡು/ಸನ್ನಿವೇಶ ಅಥವಾ ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಒಂದು ಪೋಸ್ಟ್ ಒಂದು ಅಕ್ಷರಕ್ಕೆ ಅಥವಾ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಂಚಿಕೊಳ್ಳಿ.
#ಕನ್ನಡವರ್ಣಮಾಲೆಸವಾಲು
ನ೦ತರದ ಅಕ್ಷರ ಹಾಗು ಸ್ವರ: “ಈ”
“ಈಶ್ವರ”
ಈಶ್ವರನನ್ನು ಹಲವಾರು ನಾಮದಿಂದ ಜಪಿಸಿ ಪೂಜಿಸುತ್ತೇವೆ. ಶಿವ, ಶಂಭುಲಿಂಗ, ಭೋಲೇನಾಥ, ಗಂಗಾಧರ, ಶಂಕರ, ಅರ್ಧನಾರೇಶ್ವರ, ಕೈಲಾಸನಾಥ, ಮಹೇಶ್ವರ, ನೀಲಕಂಠ, ಶಶಿಧರ… ಹೀಗೆ ಸಾವಿರಾರು ನಾಮಗಳು!!
ಒಂದು ವಿಶೇಷವೆಂದರೆ ಶಿವನನ್ನು ಮಾತ್ರ ನಾವು ಅವನ ರೂಪದಲ್ಲಿ ಅಲ್ಲಾ ಲಿಂಗದ ರೂಪದಲ್ಲಿ ಪೂಜಿಸುತ್ತೇವೆ, ಏಕೆ?? ಪುರಾತನ ಕಾಲದಿಂದಲೂ ಈ ವಿಷಯ ಚರ್ಚೆಯಲ್ಲಿದೆ. ಇವತ್ತಿಗೂ ಇದರ ಏಕಮಾತ್ರ ಕಾರಣ ಯಾರಿಗೂ ಸ್ಪಷ್ಟವಿಲ್ಲ. ಪ್ರತಿಯೊಬ್ಬರದ್ದು ಅವರವರ ವಿಚಾರ ಶಕ್ತಿಗೆ ಅನುಸಾರವಾಗಿ ಅವರದೇ ಆದ ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಎರಡು ಪ್ರಚಲಿತ್ ವ್ಯಾಖ್ಯಾನಗಳನ್ನು ಹೇಳಲು ಇಷ್ಟಪಡುತ್ತೇನೆ.
ಒಂದು, ಲಿಂಗದಲ್ಲಿ ಮೂರು ಭಾಗವನ್ನು ನೋಡಬಹದು. ಕೆಳಗಿನ ಭಾಗವನ್ನು ಬ್ರಹ್ಮ, ಮಧ್ಯ ಭಾಗವನ್ನು ವಿಷ್ಣು ಹಾಗು ಮೇಲಿನ ಭಾಗವನ್ನು ಶಿವ ಎಂದು ತ್ರಿಮೂರ್ತಿಯ ಸಂಕೇತ. ಕೆಳಗಿನ ಭಾಗವನ್ನು ಯೋನಿ – ಸ್ತ್ರೀ ಶಕ್ತಿಯ ಸಂಕೇತದೊಡನೆ ಪ್ರತಿನಿಧಿಸಲಾಗುತ್ತದೆ. ಲಿಂಗ ಮತ್ತು ಯೋನಿಯ ಸಮ್ಮಿಲನ, ಎಲ್ಲ ಜೀವ ರಾಶಿಯ ಉಗಮದ ಸಂಕೇತ ಎಂದು ಹೇಳಲಾಗುತ್ತದೆ.
ಇನ್ನು ಪೌರಾಣಿಕದ ಪ್ರಕಾರ, ಒಬ್ಬ ಮಹಾನ್ ಮಹರ್ಷಿ (ಹೆಸರು ಗೊತ್ತಿಲ್ಲ) ಶಿವ ಕೈಲಾಸಕ್ಕೆ ಶಿವನ ದರ್ಶನ ಮಾಡಲು ಹೋದಾಗ, ಶಿವ ಅದೆಷ್ಟೂ ಎತ್ತರವಾಗಿದ್ದ ಅಂದರೆ ಮಹರ್ಷಿಗೆ ಗೋಚರವಾಗಿದ್ದು ಶಿವನ ಲಿಂಗ ಮಾತ್ರ. ಆದ ಕಾರಣ ಅವನು ಭೂಲೋಕಕ್ಕೆ ಶಿವನ ಸಂಕೇತವಾಗಿ ಲಿಂಗನನ್ನು ಪೂಜಿಸಲು ಮಾನವರಿಗೆ ತಿಳಿ ಹೇಳಿದ.
ಹೀಗೆ ಹಲವಾರು ವ್ಯಾಖ್ಯಾನಗಳಿವೆ. ಈಶ್ವರನ ಶಕ್ತಿ ಅಪಾರ. ಶಿವನಿಗೆ ಆದಿಯೂ ಇಲ್ಲ ಅಂತ್ಯವು ಇಲ್ಲ. ಶಿವ ನಿರಾಕಾರ. ಈಶ್ವರ ಪದವನ್ನು ಯಾವ ನಾಮಪದಕ್ಕೂ ಸೇರಿಸಿದರು ಹೊಂದಿಹೋಗುತ್ತದೆ – ಇದರಿಂದ ನಮಗೆ ತಿಳಿಯುದು, ಶಿವ ಎಲ್ಲರಲ್ಲೂ ನೆಲಿಸಿದ್ದಾನೆ.
ಇಂದು ಮಹಾ ಶಿವರಾತ್ರಿ, ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಓಂ ನಮಃ ಶಿವಾಯ!
ಹಿಂದಿನ ಅಕ್ಷರದ ಪೋಸ್ಟಿಗಾಗಿ ಕೆಳಗಿನ ಅಕ್ಷರವನ್ನು ಒತ್ತಿ.
Very nice n informative 🙂
LikeLike
Thank you Prajna 🙂
LikeLike
[…] on each Kannada alphabet. The topic for that letter coincide with festival made me feel good. Check here for the post if you can read […]
LikeLike
[…] ಅ ಆ ಇ ಈ […]
LikeLike