ಋತು – #ಕನ್ನಡವರ್ಣಮಾಲೆಸವಾಲು

ಹೊಸ ವರ್ಷಕ್ಕೆ ನನ್ನದೊಂದು ಸಣ್ಣ ಪ್ರಯತ್ನ. ಕನ್ನಡ ವರ್ಣಮಾಲೆಯಲ್ಲಿ ಬರುವ ಪ್ರತಿ ಅಕ್ಷರದ ಒಂದು ಬ್ಲಾಗ್ ಪೋಸ್ಟ್. ನೀವು ಸಹ ಪ್ರಯತ್ನ ಮಾಡಿ ಹಾಗು ನನ್ನ ಈ ಬ್ಲಾಗ್ ಪೋಸ್ಟ್ಗೆ ಲಿಂಕ್ ಮಾಡಿ. ಈ ವರ್ಷ ಕೊನೆಗೊಳ್ಳುವ ಮುನ್ನ ಮುಗಿಸುವ ಸವಾಲು. ಕಥೆ/ಕವನ/ಚುಟುಕು/ಸಂಭಾಷಣೆ/ಮಾಹಿತಿ/ಚಿತ್ರ/ಛಾಯಾಗ್ರಹಣ/ನಾಟಕದ ತುಂಡು/ಸನ್ನಿವೇಶ ಅಥವಾ ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಒಂದು ಪೋಸ್ಟ್ ಒಂದು ಅಕ್ಷರಕ್ಕೆ ಅಥವಾ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಂಚಿಕೊಳ್ಳಿ.

#ಕನ್ನಡವರ್ಣಮಾಲೆಸವಾಲು


ನ೦ತರದ ಅಕ್ಷರ ಹಾಗು ಸ್ವರ: “ಋ” , ( “ೠ” – ಬಳಿಕೆಯಲ್ಲಿ ಇಲ್ಲ )

Letter7-8


“ಋತು”

ನಮ್ಮ ಪೂರ್ವಜ್ಜರು ಸೂರ್ಯನ ಸುತ್ತ ಭೂಮಿಯ ಪಥ ಸಂಚಲನ ಹಾಗು ಭೂಮಿಯ ಓರೆಯಾದ ವಾಲುವಿಕೆ ಸೂರ್ಯನ ಪಥಕ್ಕೆ(ಕ್ರಾಂತಿವೃತ್ತ) ಮತ್ತು ತನ್ನ ಕಕ್ಷದಲ್ಲಿ ಸುತ್ತುವ ಚಲನೆಯನ್ನು ಗಮನದಲ್ಲಿಟ್ಟು ಒಂದು ವರ್ಷವನ್ನು ಆರು ಋತುವಾಗಿ ವಿಂಗಡಿಸಿದ್ದಾರೆ.

ಅವುಗಳ ವಿವರ ಹೀಗೀದೆ;

ಋತು ಆಂಗ್ಲ ಹೆಸರು ಮಾಸಗಳು ಅವಧಿ ಆಂಗ್ಲ ಮಾಸ ಕಾಲ
ವಸಂತ Spring ಚೈತ್ರ, ವೈಶಾಖ ಅರವತ್ತು ದಿವಸಗಳು Mid March to Mid May
ಗ್ರೀಷ್ಮ Summer ಜ್ಯೇಷ್ಠ, ಆಷಾಢ ಅರವತ್ತು ದಿವಸಗಳು Mid May to Mid July
ವರ್ಷ Monsoon ಶ್ರಾವಣ, ಭಾದ್ರಪದ ಅರವತ್ತು ದಿವಸಗಳು Mid July to September
ಶರತ್ Autumn ಆಶ್ವಯುಜ, ಕಾರ್ತಿಕ ಅರವತ್ತು ದಿವಸಗಳು Mid September to November
ಹೇಮಂತ Early Winter ಮಾರ್ಗಶಿರ, ಪುಷ್ಯ ಅರವತ್ತು ದಿವಸಗಳು Mid November to January
ಶಿಶಿರ Late Winter & Fall ಮಾಘ, ಫಾಲ್ಗುಣ ಅರವತ್ತು ದಿವಸಗಳು Mid January to Mid March

ಸೂರ್ಯನ ಪಥ ಸಂಚಲನದಿಂದ ಪ್ರಕೃತಿಯಲ್ಲಿ ಹವಾಮಾನ, ಬೆಳಕು, ಹಗಲು ರಾತ್ರಿ ವ್ಯತ್ಯಯವನ್ನು ಗಮನಿಸಿ ಋತುವನ್ನು ವಿಂಗಡಿಸಿದರು. ನಕ್ಷತ್ರಗಳ ವಿವಿಧ ಆಕರಗಳನ್ನು ಕಂಡು ಅದಕ್ಕೆ ರಾಶಿ ಎಂದು ಹೆಸರು ಇಟ್ಟರು. ಹೀಗೆ ೬ ಋತು ಕಾಲಕ್ಕೆ ೧೨ (ದ್ವಾದಶ) ರಾಶಿಗಳನ್ನು ಗುರುತಿಸಿದರು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಹಂತಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆದರು. ಪ್ರತಿ ಸಂಕ್ರಾಂತಿಗೂ ಒಂದು ವಿಶೇಷ ಹಾಗು ಹಬ್ಬದ ಸಂಭ್ರಮ. ಹೀಗೆ ಪ್ರತಿ ಸಂಕ್ರಾಂತಿಗೂ ಹಬ್ಬ, ವಿವಿಧ ಧಾರ್ಮಿಕ ಹಾಗು ಪ್ರಾದೇಶಿಕ ವಿಶೇಷತೆಯನ್ನು ಸೇರಿಸುತ್ತಾ ಹೋದರು. ಉತ್ತರಾಯಣಕ್ಕೆ ೩ ಋತುಗಳು ಹಾಗು ದಕ್ಷಿಣಾಯನಕ್ಕೆ ೩. ಪ್ರಕೃತಿಯ ಪರಿವರ್ತನೆಗೆ ಅನುಸರಿಸುವಂತೆ ಹಬ್ಬ, ಆಹಾರ, ಜೀವನ ಶೈಲಿ ಹಾಗು ದೈನಂದಿನಿ ಕ್ರಮಗಳನ್ನು ಅನುಸರಿಸಿದರು ಮತ್ತು ಅದನ್ನು ಮುಂಬರುವ ಪೀಳಿಗೆಗೆ ಸಂಪ್ರದಾಯವಾಗಿ ಪರಿವರ್ತಿಸಿದರು. ನಮ್ಮ ಆರೋಗ್ಯ ಚೆನ್ನಾಗಿರಲು ಈ ಪ್ರಕಾರದ ಜೀವನ ಶೈಲಿಯನ್ನು ಅಳವಡಿಸಿದರೆ ಆರೋಗ್ಯಕರವಾಗಿ ಇರಬಹುದು.

ಅಂದಹಾಗೆ, ನನ್ನ ಮನಮೆಚ್ಚಿದ ಕಾಲವೆಂದರೆ ವಸಂತ ಹಾಗು ವರ್ಷ. ವಸಂತವು ಋತುಗಳ ರಾಜ. ಕವಿಗಳ ಮನಮೆಚ್ಚಿದ ಕಾಲ. ಪ್ರಕೃತಿಯು ಹಸಿರು ಎಲೆಗಳಿಂದ ಮೈದುಂಬಿ ಕಂಗೊಳಿಸುತ್ತಿರುತ್ತದೆ. ಬಣ್ಣ ಬಣ್ಣದ ಹೂಗಳು ನೋಡಲು ಬಲು ಸುಂದರ. ಇನ್ನು ವರ್ಷ ಕಾಲದಲ್ಲಿ ಮಳೆಯ ರಭಸ, ಪ್ರಾಣಿ ಪಕ್ಷಿಯ ಚಿಲಿಪಿಲಿ ಆನಂದಮಯ.

ನಿಮಗೆ ಯಾವ ಋತು ಇಷ್ಟ?

ShilpaNairy_Signature

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s