ಔಷಧೀಯ ಗಿಡಮೂಲಿಕೆ ದೊಡ್ಡಪತ್ರೆ – #ಕನ್ನಡವರ್ಣಮಾಲೆಸವಾಲು

ಹೊಸ ವರ್ಷಕ್ಕೆ ನನ್ನದೊಂದು ಸಣ್ಣ ಪ್ರಯತ್ನ. ಕನ್ನಡ ವರ್ಣಮಾಲೆಯಲ್ಲಿ ಬರುವ ಪ್ರತಿ ಅಕ್ಷರದ ಒಂದು ಬ್ಲಾಗ್ ಪೋಸ್ಟ್. ನೀವು ಸಹ ಪ್ರಯತ್ನ ಮಾಡಿ ಹಾಗು ನನ್ನ ಈ ಬ್ಲಾಗ್ ಪೋಸ್ಟ್ಗೆ ಲಿಂಕ್ ಮಾಡಿ. ಈ ವರ್ಷ ಕೊನೆಗೊಳ್ಳುವ ಮುನ್ನ ಮುಗಿಸುವ ಸವಾಲು. ಕಥೆ/ಕವನ/ಚುಟುಕು/ಸಂಭಾಷಣೆ/ಮಾಹಿತಿ/ಚಿತ್ರ/ಛಾಯಾಗ್ರಹಣ/ನಾಟಕದ ತುಂಡು/ಸನ್ನಿವೇಶ ಅಥವಾ ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಒಂದು ಪೋಸ್ಟ್ ಒಂದು ಅಕ್ಷರಕ್ಕೆ ಅಥವಾ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಂಚಿಕೊಳ್ಳಿ.

#ಕನ್ನಡವರ್ಣಮಾಲೆಸವಾಲು


ನ೦ತರದ ಅಕ್ಷರ ಹಾಗು ಸ್ವರ: “ಔ”

Letter-au


ಔಷಧೀಯ ಗಿಡಮೂಲಿಕೆ ದೊಡ್ಡಪತ್ರೆ

ಮನೆ ಮದ್ದು ಗಿಡಮೂಲಿಕೆಯಲ್ಲಿ ದೊಡ್ಡಪತ್ರೆಯು ಒಂದು. ಕರ್ನಾಟಕದ ಬಹು ಪ್ರದೇಶದಲ್ಲಿ ಮನೆಯ ಒಂದು ಮೂಲೆಯ ಕುಂಡದಲ್ಲಿ, ಮನೆಯ ಅಂಗಳದಲ್ಲಿ , ತೋಟದಲ್ಲಿ ಕಾಣಬಹುದಾದ ಗಿಡ. ಒಂದು ಟೊಂಗೆಯನ್ನು ಅಥವಾ ಕಾಂಡವನ್ನು ಹಾಗೆ ಮುರಿದು ನೆಟ್ಟಿದರು, ಕೆಲವೇ ದಿನದೊಳಗೆ ಹೇರಳವಾಗಿ ಬೆಳದು ನಿಲ್ಲುತ್ತದೆ.

ನಮ್ಮ ಮನೆಯ ಕುಂಡದಲ್ಲಿ ಮೂಡಿರುವ ದೊಡ್ಡಪತ್ರೆಯ ಗಿಡ 🙂

Doddapatre

ದೊಡ್ಡಪತ್ರೆಯ ಎಲೆಯ ತಂಬುಳಿ ಆರೋಗ್ಯಕ್ಕೆ ಉತ್ತಮ. ಇದರ ಎಲೆಯ ಚಿತ್ರಾನ್ನ ಹಾಗು ಚಟ್ನಿ ಕೂಡ ಮಾಡಬಹುದು.

ಔಷಧೀಯ ಗುಣಗಳು:

  • ದೊಡ್ಡಪತ್ರೆಯ ಎಲೆಯಲ್ಲಿ ನೀರಿನ ಅಂಶ ಹೆಚ್ಚಾಗಿ ಇರುದರಿಂದ ಅದನ್ನು ಸ್ವಲ್ಪ ಬಾಡಿಸಿ ಹಿಂಡಿ ನೀರಿನಂಶವನ್ನು ತೆಗೆದು, ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕಲುಸಿ ಮಕ್ಕಳಿಗೆ ಕುದಿಸಿದರೆ ಕೆಮ್ಮು ಕಫ ಶೀತ ಬೇಗ ಗುಣವಾಗುತ್ತದೆ.
  • ಬಾಡಿಸಿ ಇಟ್ಟ ಎಲೆಯನ್ನು ಎದೆಗೆ ಸವರಿದರೆ ಕಫ ಕರಗುತ್ತದೆ.
  • ಇದರ ಎಲೆಯನ್ನು ಮೈಗೆ ಉದ್ದಿ ಸ್ನಾನ ಮಾಡುವುದರಿಂದ ಚರ್ಮ ಸಂಬಂಧಿತ ಸೋಂಕು ದೂರವಾಗುತ್ತದೆ.
  • ಚರ್ಮದ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯವಿದೆ.
  • ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ.
  • ಎಲೆಯನ್ನು ವಿವಿಧ ರೀತಿಯಿಂದ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
  • ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ದೊಡ್ಡಪತ್ರೆ ಎಲೆಯು ತುಂಬಾ ಆರೋಗ್ಯಕ್ಕೆ ಉಪಕಾರಿ ಹಾಗು ಹಿತ ನೀಡುವುದು. ನೀವು ಈ ಎಲೆಯ ಬಳಿಕೆಯನ್ನು ಹೆಚ್ಚಿಸಿ ಅದರ ಔಷಧೀಯ ಪ್ರಯೋಜನವನ್ನು ಆನಂದಿಸಿ.

ShilpaNairy_Signature

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s