ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೧

ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ರಂಗೋಲಿ ಇಟ್ಟು ಪೂಜೆ ಮಾಡಿ ನಗು ನಗುತ್ತಾ ನನ್ನ ಎಬ್ಬಿಸುತ್ತಿರೋದು ನನ್ನ ಪ್ರೀತಿಯ ಅಮ್ಮ ಲಲಿತ. ಪಡಸಾಲೆಯ ಬೆತ್ತದ ಕುರ್ಚಿಯಲ್ಲಿ ನ್ಯೂಸ್ ಪೇಪರ್ ಓದುತ್ತಾ ಕೂತಿರೋದೇ ನನ್ನ ಮಾಡೆಲ್ , ಆದರ್ಶ ಅಪ್ಪ ಶ್ರೀಧರ್ ನೆಲ್ಲಿಕಟ್ಟಿ. ನನ್ನ ಅಕ್ಕ ಸಂಧ್ಯಾ , ತಂಗಿ ವಂದನಾ ಮತ್ತು ನಾನು ಏಕೈಕ ಪುತ್ರ ಭಾಸ್ಕರ್. ಇದು ನನ್ನ ಪುಟ್ಟ ಜಗತ್ತು.

“ನನ್ನ ಬಿಟ್ಟೀಯೇನೋ… ” ಇನ್ನೊಂದು ಕೋಣೆಯಿಂದ ಬಂತು ನಡುಕ ಧ್ವನಿ.

“ಇಲ್ಲ ಅಜ್ಜಿ.. ಬಂದೆ ಇರಿ..”

ಇವರು ನಮ್ಮ ಅಜ್ಜಿ ಶಾಂತಮ್ಮ. ಹೆಸರಿಗೆ ತದ್ವಿರೋದ. ಆದರೆ ‘ಶಿ ಇಸ್ ಮೈ ಫಸ್ಟ್ ಲವ್’.

ಅಮ್ಮ ಅಪ್ಪ ಇಬ್ಬರು ಸ್ಕೂಲ್ ಟೀಚರ್ಸ್ , ಹಾಗಾಗಿ ನಾನು ಹೆಚ್ಚಾಗಿ ಬೆಳೆದಿದ್ದು ನಮ್ಮೂರು ನೆಲ್ಲಿಕಟ್ಟಿ ಅಜ್ಜಿ ಮನೆಯಲ್ಲಿ. ಸಲಗದ ಹಾವಳಿಯಲ್ಲಿ ಅಜ್ಜ ತೀರಿಕೊಂಡ ಮೇಲೆ ಅಜ್ಜಿ ನಮ್ಮಜೊತೆ ಸಿಟಿಯಲ್ಲೇ ಇರೋದು. ಅಜ್ಜಿಮನೆ ತುಂಬಾ ನೆನಪಾಗುತ್ತೆ. ಆಗಲೇ ಹತ್ತು ವರ್ಷ ಆಯಿತು ಆ ಕಡೆ ತಲೆ ಹಾಕದೆ. ಅವಕಾಶಕ್ಕಾಗಿ ಕಾಯುತ್ತ ಇದೀನಿ. ಅಲ್ಲಿಗೆ ಹೋಗೋಣ ಅಂದ್ರೆ ಅಪ್ಪ ಏನಾದ್ರು ನೆಪ ಮಾಡಿ ಮುಂದೆ ಹಾಕ್ತಾರೆ.

ಪೋಸ್ಟ್ …..

ಭಾಸ್ಕರ, ನೋಡು ಏನಂತ.

ಹೂ ಅಪ್ಪ…

ವಾಹ್! ಅಮ್ಮ… ಬಾ ಇಲ್ಲಿ… ಅಪ್ಪ ಇದು ನನ್ನ ಪೋಸ್ಟಿಂಗ್ ಲೆಟರ್. ಯಾವ ಜಿಲ್ಲೆಗೆ ಅಂತ ಗೆಸ್ ಮಾಡಿ ?

ನೀನೆ ಹೇಳೋ ಮರೆಯ. ದೂರ ಎಲ್ಲೂಆಗದೆ ಇದ್ರೆ ಸಾಕು ತಾಯಿ ಚಾಮುಂಡಿ ಕೃಪೆಯಿಂದ.

ನಿನ್ನ ಬೇಡಿಕೆ ಈಡೇರಿದೆ ಅಮ್ಮ.. ನಾನೀಗ ಪುಷ್ಕರವನ, ನಮ್ಮೂರ ಜಿಲ್ಲೆಯ ಜಿಲ್ಲಾಧಿಕಾರಿ.

ಅಪ್ಪನ ಮುಖದಲ್ಲಿ ಏನೋ ಕಳವಳ. ಮಗನ ಸಾಧನೆಗೆ ಆನಂದಿಸುವುದೇ ಇಲ್ಲ ಇಷ್ಟು ದಿನ ನಮಗೆ ಆ ಗ್ರಹಚಾರ ಬೇಡ ಅಂತ ದೂರ ಇದ್ದಕಡೆಗೆ ಮಗನ ಕಳಿಸುವುದೇ ಎಂಬ ಗೊಂದಲ.

ಈ ಸುದ್ದಿ ಕೇಳಿ ಅಜ್ಜಿಗೆ ಭಾಸ್ಕರನು ಭರವಸೆಯ ಆಶಾಕಿರಣದಂತೆ ಭಾಸವಾದನು. ಅವನ ಎಲ್ಲಾ ಗುಟ್ಟುಗಳು, ಸಾಮರ್ಥ್ಯ ಅಜ್ಜಿಗೆ ಮಾತ್ರ ಗೊತ್ತು. ಅವನ ಯೋಜನೆ ಫಲಿಸಲಿ, ಗುರಿ ಮುಟ್ಟಲ್ಲಿಅಂತ ಹಾಸಿಗೆ ಮೇಲಿಂದಲೇ ಅವನ ನೋಡುತ ಆಶೀರ್ವದಿಸಿದಳು.

ಹತ್ತು ವರ್ಷದ ಹಿಂದಿನ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟಳು ಶಾಂತಮ್ಮ. ಭಾಸ್ಕರನ ವಿದ್ಯಾಭ್ಯಾಸ ಪೂರ್ಣ ಆದ ನಂತರ ಹೇಳಬೇಕೆಂದು ಅಷ್ಟು ವರುಷ ಕಾದು ವಿಷಯವನ್ನು ಆರು ತಿಂಗಳ ಹಿಂದೆ ಅವನಲ್ಲಿ ತೋಡಿಕೊಂಡಿದ್ದಳು. ಭಾಸ್ಕರನ ಯು.ಪಿ.ಎಸ.ಸಿ ಫಲಿತಾಂಶ ಬಂದ ದಿನವೇ ಅವಳು ಮನದಾಳದ ನೋವನ್ನು ಹಂಚಿಕೊಂಡಿದ್ದಳು. ಆದ ಘಟನೆಯನ್ನು ತಿಳಿದು ಭಾಸ್ಕರನು ಮರುಕಿದ್ದನು. ಅಜ್ಜಿಯ ನೋವಿಗೆ ಪರಿಹಾರ ಕೊಡಿಸಲೇ ಬೇಕೆಂದು ಭೀಷ್ಮ ಪ್ರತಿಜ್ಞೆ ಮಾಡಿದನು.

ಆರು ತಿಂಗಳ ತರಬೇತಿಯಲ್ಲಿ ಪ್ರತಿಯೊಂದು ವಿಭಾಗದಲ್ಲೂ ಮೇಲುಗೈ ಸಾಧಿಸಿ ಆ ವರುಷದ ತಂಡದ ವಿದ್ಯಾರ್ಥಿಯರಲ್ಲಿ ಪ್ರಾಮುಖ್ಯನಾದ. ಇದರಿಂದ ಅವನ ಪೋಸ್ಟಿಂಗ್ ಸ್ಥಳ ಅವನಿಗೆ ಬೇಕಾದ ಜಿಲ್ಲೆಗೆ ಆಯಿತು. ಅಭಿವೃದ್ಧಿಯಲ್ಲಿ ಹಿಂದೆ ಇದ್ದ ಜಿಲ್ಲೆ ಆದ ಕಾರಣ ಇನ್ನು ಸಲೀಸಾಗಿಯೇ ಸಿಕ್ಕಿತು. ಅದೇ ಅವನು ಹುಟ್ಟಿ ಬೆಳೆದ ಗ್ರಾಮ ನೆಲ್ಲಿಕಟ್ಟಿಯ ಜಿಲ್ಲೆ ಪುಷ್ಕರವನ.

ಅಮ್ಮ, ಬನ್ನಿ .. ಅಣ್ಣನಿಗೆ ಕಳುಹಿಸಲು ಎಲ್ಲಾ ಸಿದ್ಧತೆ ಮಾಡೋಣ.

ನಿನಗೆ ಅವನ ಕಳುಹಿಸುವುದು ಅಷ್ಟೊಂದು ಅವಸರ ನೋಡು.

ಹೂ ಮತ್ತೆ, ಅವನ ಕಾಟ ತಪ್ಪುತ್ತೆ. ಇಡೀ ಹೊತ್ತು ತಾನು ಪುಸ್ತಕ ಹಿಡೊಯುದಲ್ಲದೆ ನಮಗೂ ಪ್ರಾಣ ತಿಂತಾನೆ.

ಅಬ್ಬಬ್ಬಾ, ಶುರು ಆಯಿತು ನಿಂದು.. ಸರಿ ಬಾ..

ಭಾಸ್ಕರ ಮತ್ತು ಶ್ರೀಧರ ನಗುತ್ತ ನಿಂತರು.

…….. ಮುಂದುವರಿಸಲಾಗುವುದು…… (To be continued….)


ಈ ಕಥೆಯನ್ನು ಮೂಲತಃ ಕರ್ಮವೀರ ದೀಪಾವಳಿ ಕಥಾಸ್ಪರ್ಧೆಗೆ ಬರಿದಿದ್ದು. ಆಯ್ಕೆ ಆಗದ ಕಾರಣ ನನ್ನ ಬ್ಲಾಗನಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನೀವು ಇದನ್ನಾ ಓದಿ ಆನಂದಿಸುತ್ತೀರಿ ಎನ್ನುವ ಭರವಸೆಯೊಂದಿಗೆ,

ನಿಮ್ಮ,
ಶಿಲ್ಪಾ ನಾಯರಿ.

5 thoughts on “ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೧

  1. ಮಾತೃ ಭಾಷೆಯಲ್ಲಿ ಓದೋದು ಮತ್ತು ಬರೆಯೋದೆ ಒಂದು ಖುಷಿ. Nice story. Keep writting

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s