ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೨

ಮೊದಲನೆಯ ದಿನವೇ ಖಡಕ ಆಫೀಸರನಂತಯೇ ಹತ್ತು ವರ್ಷದ ಹಳೆ ಪೆಂಡಿಂಗ್ ಫೈಲ್ಸ್ ಎಲ್ಲಾ ತನ್ನ ಮೇಜಿನ ಮೇಲೆ ಇಡಲು ಆದೇಶಿಸಿದ.

ಹಗಲು ರಾತ್ರಿಯನ್ನು ಲೆಕ್ಕಿಸದೆ ಪ್ರತಿಯೊಂದು ಫೈಲನ್ನು ಸೂಕ್ಷ್ಮವಾಗಿ ಓದಿದನು. ಅಂತೂ ಅವನಿಗೆ ಬೇಕಾದ ಫೈಲ್ ಕೊನೆಗೂ ಸಿಕ್ಕಿತು.

“ಕಾಗದ ಕಾರ್ಖಾನೆ ನಿರ್ಮಾಣ ಯೋಜನೆ, ನೆಲ್ಲಿಕಟ್ಟಿ”

**********

ನೆಲ್ಲಿಕಟ್ಟಿ, ಒಂದು ಸುಂದರವಾದ ಗ್ರಾಮ. ಘಟ್ಟದ ತಪ್ಪಲಲ್ಲಿ, ಗಂಗಾವತಿ ನದಿ ತೀರದಲ್ಲಿ ನೆಲೆಸಿದ, ಪ್ರಕೃತಿ ಮಡಲಲ್ಲಿ, ಹಸಿರು ಮರಗಳ ನಡುವೆ ಕಂಗೊಳಿಸುವ ಮನೋಹರವಾದ ಸಣ್ಣ ಗ್ರಾಮ. ಅಲ್ಲೊಂದು ಇಲ್ಲೊಂದು ಅನ್ನುವ ಹಾಗೆ ಸುಮಾರು ಹತ್ತು ಮೈಲಿಗೊಂದು ಭವ್ಯ ಮನೆಗಳು, ಮನೆಗಳ ಸುತ್ತ ಅಡಿಕೆ ತೋಟಗಳು. ಅಲ್ಲಿಯ ಜನರು ಪ್ರಕೃತಿಗೆ ತುಂಬಾ ಹತ್ತಿರವಾಗಿದ್ದವರು.

ಪುಷ್ಕರವನ ಜಿಲ್ಲೆಯ ತಾಂತ್ರಿಕವಾಗಿ ಹಿಂದುಳಿದ ನವಗ್ರಾಮದಲ್ಲಿ ನೆಲ್ಲಿಕಟ್ಟಿಯು ಒಂದು. ಉಳಿದ ಎಂಟು ಗ್ರಾಮದವರು ಆಧುನಿಕ ಅಭಿವೃದ್ಧಿಗೆ ಒಪ್ಪಿಗೆ ನೀಡಿದ್ದರು ಆದರೆ ನೆಲ್ಲಿಕಟ್ಟಿಯ ಜನರು ಪ್ರಕೃತಿಯ ಮಡಲಲ್ಲಿ ಹಾಯಾಗಿದ್ದು, ಯಾವುದೇ ಬದಲಾವಣೆಗಳಿಗೆ ಸಿದ್ಧವಾಗಿರಲಿಲ್ಲ. ಅದಕ್ಕೆ ಮೂಲ ಸ್ತಂಭ ರುದ್ರೇಶ್ ನೆಲ್ಲಿಕಟ್ಟಿ. ಅವರ ಪ್ರಕೃತಿ ಪ್ರೀತಿ, ಸ್ಫೂರ್ತಿದಾಯಕ ಮಾತು ಹಾಗು ನಡೆದು ಬಂದ ಹಾದಿ ಗ್ರಾಮಸ್ಥರ ಮನ ಗೆದ್ದಿತ್ತು.

********

ಫೈಲಿನಲ್ಲಿ ಇದ್ದ ಎಲ್ಲ ಮಾಹಿತಿಯನ್ನು ಓದಿದಾಗ ಅವನಿಗೆ ಘಟನೆಯ ಹಿನ್ನೆಲೆ ಅರ್ಥವಾಗತೊಡಗಿತು. ಅವನ ತಂಡದವರ ಜೊತೆಗೆ ಊರಿಗೆ ಹೊರಟ. ಗ್ರಾಮಸ್ಥರ ಬಳಿ ಚರ್ಚಿಸಿದ. ಅವನ ಅಜ್ಜನ ಬಗ್ಗೆಯೂ ವಿಚಾರಿಸಿದ. ತುಂಬಾ ಕುಟುಂಬದವರು ಊರು ಬಿಟ್ಟೇ ಹೋಗಿದ್ದರು. ಈಗ ಅಲ್ಲಿರುವರಲ್ಲಿ ಹೆಚ್ಚಿನವರು ವಲಸಿಗರು, ಗಾರೆ ಕೆಲಸಕ್ಕಾಗಿ ಬಂದವರು. ದಿನ ಪೂರ್ತಿ ಊರು ಸುತ್ತಿದರೂ ಸ್ಪಷ್ಟವಾದ ಮಾಹಿತಿ ಸಿಗದೇ ಹೋಯಿತು.

ಮನೆಗೆ ಬಂದು, ರಾತ್ರಿ ವಿಶ್ರಾಂತಿಸುತಿದ್ದಾಗ, ಪ್ರತಿಯೊಂದು ಘಟನೆಗಳು, ಜನರ ಮುಖಗಳು, ಮಾತುಗಳು ಮರುಕಳಿಸುತಿತ್ತು. ಆಲೋಚನೆಯ ಗಂಟಿನಲ್ಲಿ ಸಿಲುಕಿದವನಾಗಿದ್ದ.

ಅಷ್ಟರಲ್ಲಿ,..

ಯಜಮಾನರೇ, ಕಾಫಿ…. ಎಲ್ಲ ಕೆಲಸ ಆಯಿತು, ಬೆಳೆಗ್ಗೆ ಬರ್ತೀನಿ, ಹೇಳಿ ಹೊರಟು ಹೋದಳು ಮನೆಕೆಲಸದವಳು.

ಕಾಫಿ ಶಾಪ್… ಯಸ್.. ಯಾರವರು.. ಕಾಗದ ಕಾರ್ಖಾನೆ ಬಗ್ಗೆ ಅಂಗಡಿಯವರ ಹತ್ತಿರ ವಿಚಾರಣೆ ಹೊತ್ತಿಗೆ, ಯಾರಿಗೋ ಅನುಮಾನಾಸ್ಪದ ಕಣ್ಣಸನ್ನೆ ಮಾಡಿದ ಹಾಗೆ ಇತ್ತಲ್ಲ. ಆತ ಕೂಡ ಅಲ್ಲಿಂದ ….ಸರಿ ನಾಳೆ ನೋಡೋಣ..

…….. ಮುಂದುವರಿಸಲಾಗುವುದು…… (To be continued….)

ಅಧ್ಯಾಯ ೧


ಈ ಕಥೆಯನ್ನು ಮೂಲತಃ ಕರ್ಮವೀರ ದೀಪಾವಳಿ ಕಥಾಸ್ಪರ್ಧೆಗೆ ಬರಿದಿದ್ದು. ಆಯ್ಕೆ ಆಗದ ಕಾರಣ ನನ್ನ ಬ್ಲಾಗನಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನೀವು ಇದನ್ನಾ ಓದಿ ಆನಂದಿಸುತ್ತೀರಿ ಎನ್ನುವ ಭರವಸೆಯೊಂದಿಗೆ,

ನಿಮ್ಮ,
ಶಿಲ್ಪಾ ನಾಯರಿ.

4 thoughts on “ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೨

  1. ಅಚ್ಚುಕಟ್ಟಾದ ಬರವಣಿಗೆ ಶಿಲ್ಪ!
    ಮುಂದಿನ ಅಧ್ಯಾಯ ಓದಲು ಕಾಯುತ್ತಿದ್ದೇನೆ…

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s